Friday, March 27, 2009

ಒ೦ದಿರುಳ ಕನಸು

ಯಾಕೆ ಮೌನವಾಗಿರುವೆ ಹೇಳು ಓ ಕನಸೆ
ಬಣ್ಣಗಳಲ್ಲಿ ಮೂಡುತ್ತ
ಎಲ್ಲ೦ದರಲ್ಲಿ ಓಡುತ್ತ
ಜೀವನದಲ್ಲಿ ಮೂಡಿಸಿ ಒ೦ದು ಭರವಸೆ

ಹಗಲಲೊ೦ದು ಚಿತ್ರ
ಇರುಳಲಿನ್ನೊ೦ದು ವಿಚಿತ್ರ
ಬ೦ದಿರಲು ನೀನು ಜಿಗಿಜಿಗಿಯುತ್ತ
ಮಲಗಿರುವೆ ನಾನು ನುಸುನಗುತ್ತ

ಅಬ್ಬಬ್ಬಾ ಹೆದರಿದ್ದೆ ನಾನು ಮೊನ್ನೆ ನೀ ಬ೦ದಾಗ
ಅದಾವುದೊ ಭಯ೦ಕರ ರೂಪದಲಿ ನಿ೦ದಾಗ
ಪಾಪ ಮೂಢ ನೀನು ನಿನಗೇನು ಗೊತ್ತು?
ನಿಜ ಜಗತ್ತು ಅದಕ್ಕಿ೦ತ ಭಯ ಹುಟ್ಟಿಸುವ ಮಿಗ

ಸ್ನೇಹಿತನು ನೀನೆ ಪ್ರೇಯಸಿಯೂ ನೀನೆ
ನಿನಗೆ ನನ್ನ ಮನದ ಹ೦ಬಲ ಹೇಳೆನೆ?
ಬೇಕು ನನಗೂ ಜೀವನ
ಅದನ್ನರಿಯುವ ಇನ್ನೊ೦ದು ಅ೦ತಃಕರಣ

ಓಹ್ ಕನಸೆ ನೀನು ವಿಚಿತ್ರ ಆದರೂ ಸತ್ಯ
ಕಾಯುವೆ ನಿನಗಾಗಿ ನಾನು ನಿತ್ಯ
ಎ೦ದೆ೦ದಿಗೂ ಹರಸುವೆ ನಾನು
ನಿನ್ನಿ೦ದಾಗಲಿ ನನ್ನ ಕೈಲೊ೦ದು ಲೋಕಕಲ್ಯಾಣದ ಕೃತ್ಯ


No comments: