ನಮಗೆಲ್ಲಾ ತಿಳಿದಿರುವ ಹಾಗೆ ಈ ಜೀವನ ಒಂದು ಪಯಣ. ಈ ಪಯಣದಲ್ಲಿ ನಾವು ಸಹಪ್ರಯಾಣಿಕರನ್ನು ಹುದುಕುತ್ತಾ ತಡುಕುತ್ತಾ ಹೋಗುತ್ತಿರುತ್ತೇವೆ.
ಇಂಥಾ ಸಹಪ್ರಯಾಣಿಕರಲ್ಲಿ ಕೆಲವರನ್ನು ಕೊನೆಯವರೆಗೂ ಇರಲಿ ಅಂತ ಅಂದುಕೊಂಡಿರುತ್ತೇವೆ. ಆದರೆ ಅವರು ಮುಂಚೆಯೇ ನಮ್ಮ ಜೀವನದಿಂದ ಅಗಲಿರುತ್ತಾರೆ. ಹಾಗೆಯೆ ಯಾರನ್ನು ಬೇಡಾ ಅಂದುಕೋಂಡಿರುತ್ತೀವೊ ಅವರೇ ಕೊನೆಯವರೆಗು ಜೊತೆ ಕೊಟ್ಟಿರುತ್ತಾರೆ. ಬಹಳಷ್ಟು ಸಾರಿ ಕೆಲವರು ನಮ್ಮ ಜೊತೆ ಪ್ರಯಾಣ ಮಾಡುತ್ತಿದ್ದಾರೆ ಅಂತ ನಮಗೆ ಗೊತ್ತೇ ಇರುವುದಿಲ್ಲ ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು.
ಈ ಜೀವನ ಅನ್ನೊ ಮಹಾ ಪ್ರಯಾಣದಲ್ಲಿ ಹಲವಾರು ಸಣ್ಣ ಸಣ್ಣ ಪ್ರಯಾಣಗಳಲ್ಲಿ ನಾವು ಸಾಗುತ್ತಲೇ ಇರುತ್ತೇವೆ. ಅವು ಸಾಮಾನ್ಯ, “Bus” ನಲ್ಲೋ, “Train” ಗಳಲ್ಲೋ ಅಥವ ವಾಯು ವಿಮಾನದಲ್ಲೋ ಆಗಿರುತ್ತವೆ. ಬಹಳಷ್ಟು ಮಂದಿಗೆ ಇಂಥ ಪ್ರಯಾಣಗಳಲ್ಲಿ ಸ್ನೆಹಿತರನ್ನು ಮಾಡಿಕೊಳ್ಳುವ ಅಭ್ಯಾಸವು ಉಂಟು.
ಆದರೆ ನನ್ನ ಆಪ್ತ ಸ್ನೇಹಿತ ರಾಜುವಿನ ಕಥೆಯೇ ಬೇರೆ. ಎಷ್ಟೇ ದೂರದ ಪ್ರಯಾಣ ಆದರೂ ತನ್ನ ಪಾಡಿಗೆ ತಾನು ಯಾವುದೋ ಮೂಲೆಯಲ್ಲಿ ಗಂಟು ಮೂತಿ ಹಾಕಿಕೊಂಡು ಕೂತುಬಿಡುತ್ತಾನೆ. ತನಗೂ ಜಗತ್ತಿಗೂ ಸಂಭಂದವೇ ಇಲ್ಲದಿರುವ ಹಾಗೆ. ಅವನನ್ನು ನೋಡಿದವರಿಗೆ ಮನೆಯಲ್ಲಿ ಹೆಂಡತಿಯೊಡನೆ ಯುದ್ಧವೇ ಆಡಿಕೊಂಡು ಬಂದಿರಬೇಕು ಅಂತ ಅನ್ನಿಸುವ ಹಾಗೆ.
ಅವನು ದಸರ ನೋಡಲು ಮೈಸೂರಿಗೆ ಹೋದಾಗಲಂತು ಅವನ ಹುಚ್ಚಾಟವನ್ನು ನೋಡಬೇಕು. ದಸರ ಉತ್ಸವಕ್ಕೆ ಅರಮನೆಗೆ ಹೋಗುವುದನ್ನು ಬಿಟ್ಟು ಸಾಮಾನ್ಯ-ಜನ ಜಂಗುಳಿ ಇರುವ ಜಾಗ ಅಂದರೆ “Market” ಗೋ ಅಥವ ರಸ್ತೆ ಬದಿಗಳಿಗೋ ಹೋಗಿ ಮತ್ತೆ ಅದೇ ಗಂಟು ಮೂತಿ ಹಾಕಿಕೊಂಡು ನಿಂತುಬಿಡುತ್ತಾನೆ.
ಅದ್ಯಾಕಪ್ಪ ಇಂಥ ವಿಚಿತ್ರ ಸ್ವಭಾವ ನಿನಗೆ ಅಂದರೆ ಅವನು ಅದಕ್ಕಿಂತಲೂ ವಿಚಿತ್ರ ಉತ್ತರ ಕೊಡುತ್ತಾನೆ. ಇಂಥ ಜಾಗಗಳು ಅಥವ ಪ್ರಯಾಣಗಳಲ್ಲಿ ಅವನು ಜನರನ್ನು “observe” ಮಾಡುತ್ತಾನಂತೆ. ಅವರ ಹಾವ ಭಾವ, “Dressing sense”, “Style”, “behavior”, “body language”, ಇತ್ಯಾದಿ ಇತ್ಯಾದಿ.
ಅವನ ಪ್ರಕಾರ ಎಲ್ಲರಿಗೂ ತಮ್ಮದೊಂದೇ ಲೋಕ, ಜಗತ್ತಿನ ಅರಿವೇ ಇರುವುದಿಲ್ಲವಂತೆ. ಅದರಲ್ಲು ರಾಜುವಿಗೆ ಬಡವರ ಅಥವ ಹಳ್ಳೀ ಜನರ “behavior” ಅಂದರೆ ತುಂಬಾ “curiosity”. ಅದರಲ್ಲಿ “innocence” ಬಹಳ ಇರುತ್ತದಂತೆ. ಹಾಗೆಯೆ ನಮ್ಮ ಹಾಗಿರುವ ಮಧ್ಯಮ ವರ್ಗದವರ ಕಥೆಯೇ ಬೆರೆಯಂತೆ. ನಮ್ಮಂಥವರು ಸದಾಕಾಲ ಚೌಕಾಸಿ ಮಾಡುವುದನ್ನು ನೋಡಲು ಬಹಳ ಮಜವಂತೆ ಅವನಿಗೆ.
ನಮ್ಮ ರಾಜು ಇಂಥ ಜನ ಜಂಗುಳಿಯಲ್ಲಿ ಜೀವನದ ಅನುಭವ ಪಡೆಯುತ್ತಾನೆ. ಜಾತ್ರೆಯಲ್ಲಿ ಕಳೆದು ಹೋಗುವುದು ಅ೦ದರೆ ಇದೇ ಇರಬೇಕು. ಈ ಅಭ್ಯಾಸದಿಂದಾಗಿ ರಾಜು ಯಾರನ್ನಾದರು ನೋಡಿದರೆ ಥಟ್ಟನೆ ಅವರ ಸ್ವಭಾವ ಹೇಗೆ ಎಂದು ಗ್ರಹಿಸಿಬಿಡುತ್ತಾನೆ. ಅವನ ಜೀವನದಲ್ಲು ಬಹಳ ವಿವೇಚನೆಯ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಾನೆ.
ನಿಮಗೂ ಕೂಡ ನಿಮ್ಮ ಜೀವನ ಎಂಬ ಪಯಣದಲ್ಲಿ ರಾಜುವಿನ ಹಾಗೆ “observer” ಸಿಕ್ಕಿರಬಹುದು ಹಾಗೆ “ignorant” ಗಳೂ ಸಿಕ್ಕಿರಬಹುದು.ಎ೦ಥವರೇ ಆದರೂ ನಮ್ಮ ಸಹಪಯಣಿಗರಿಗೆ ನಮ್ಮ ಕೈಲಾದ ಸಹಾಯ ಮಾಡಿಕೊಂಡು ನಾವೂ ಸಂತೋಷವಾಗಿದ್ದರೆ ಈ ಜೀವನ ಎ೦ಬ ಪಯಣ ಅದೆಷ್ಟು ಸುಮಧುರ ಅಲ್ಲವೆ?
- Sriharsha
No comments:
Post a Comment