Sunday, February 14, 2010

ಇಂದಿನ ಬೆಂಗಳೂರು

ಬೆಂಗಳೂರಿನಲಿ ಶಾಪಿಂಗ್ ಮಾಲ್ ಗಳ ಸಾಲು,
ವೀರ ಕನ್ನಡಿಗನೆ ಎಚ್ಚೆತ್ತು ಎದ್ದೇಳು...

ಕರ್ರೆಂಟಿನ ಕಥೆಯನು ಕೇಳುವ ನಾವು ಬನ್ನಿ
ಜನಗಳೆ ಬನ್ನಿ
ನೀರಿನ ಅಭಾವ ವಿಪರೀತವಾಗಿ
ಬೆಂಗಳೂರಿನಲಿ ಕರ್ರೆಂಟು ಇರುವುದೆ ಕಮ್ಮಿ

ಬೆಂಗಳೂರಿನಲಿ ಶಾಪಿಂಗ್ ಮಾಲ್ ಗಳ ಸಾಲು,
ವೀರ ಕನ್ನಡಿಗನೆ ಎಚ್ಚೆತ್ತು ಎದ್ದೇಳು...

ಇಂಧನದ ಪಾಡು ನೋಡಿ
ಕೂಡಿ ಎಲ್ಲರೂ ಇದರ
ಉಳಿತಾಯವನ್ನು ಸ್ವಲ್ಪ ಮಾಡಿ
ಹೀಗೆ ಆದರೆ ಮತ್ತೆ ಮರಳುವುದು ಗಾಡಿ, ಎತ್ತಿನ ಗಾಡಿ

ಬೆಂಗಳೂರಿನಲಿ ಶಾಪಿಂಗ್ ಮಾಲ್ ಗಳ ಸಾಲು,
ವೀರ ಕನ್ನಡಿಗನೆ ಎಚ್ಚೆತ್ತು ಎದ್ದೇಳು...

ಮಂಕು ತಿಮ್ಮನಿಗೂ ಮಾಡಿದೆ ಇಂಗ್ಲೀಷು ಮೋಡಿ
ಮಮ್ಮಿ ಡ್ಯಾಡಿ ಅಂಕಲ್ ಆಂಟಿ ಕೂಡಿ
ಕನ್ನಡ ಹೋಯಿತು ಇಂಗ್ಲೀಷು ಬಂದಿತು
ಥ್ಯಾಂಕ್ಯುವಿಗೆ ಸ್ಸಾರ್ರಿ ಆಯಿತು ಜೋಡಿ

ಬೆಂಗಳೂರಿನಲಿ ಶಾಪಿಂಗ್ ಮಾಲ್ ಗಳ ಸಾಲು,
ವೀರ ಕನ್ನಡಿಗನೆ ಎಚ್ಚೆತ್ತು ಎದ್ದೇಳು...

ಇನ್ನಾದರೂ ಬನ್ನಿ ಕನ್ನಡದ ಕಂದಮ್ಮಗಳೇ
ಜಯ ಭಾರತ ಜನನಿಯ ತನುಜಾತೆ, ಎಂದು ಉಲಿಯಿಯೋಣ
ಜಯ ಹೇ ಕರ್ನಾಟಕ ಮಾತೆ
ಎಂದು ಕನ್ನಡದ ಸಿಹಿಯನ್ನು ಸವಿಯೋಣ.

No comments: