ಗೂಡಿನಲ್ಲೊಂದಿತ್ತು ಪುಟ್ಟ ಹಕ್ಕಿ
ಪಿಳಿ ಪಿಳಿ ಕಣ್ಣುಗಳು, ಹಸಿ ಹಸಿ ರೆಕ್ಕೆಗಳು
ಹುಲ್ಲು ಕಡ್ಡಿಯೊಂದ ಕೂತು ಹೆಕ್ಕಿ
ಕಾಯುತ್ತಿತ್ತು ಆ ಹಕ್ಕಿ
ಹಾರುವ ಆಸೆ, ಬೀಳುವ ಭಯ
ಹಕ್ಕಿಯ ದೇಹ ಪುಟ್ಟದು, ರೆಕ್ಕೆ ಬಲು ಚಿಕ್ಕದು
ಆದರು ಅದು ಮಾಡಿದೆ ಹಾರುವುದು ನಿಶ್ಚಯ
ಹೊರಗಡೆ ಕಪ್ಪು ಮೋಡಗಳ ಪ್ರಳಯ
ಮಳೆ ಬರುತ್ತಿದೆ, ಮೋಡ ಗುಡುಗಿದೆ
ಹಕ್ಕಿ ಹಾರಲು ಹೋಗಲು
ಗಾಳಿಯು ರಭಸದಿ ಬೀಸಿದೆ
ಜಾಣ ಹಕ್ಕಿ ಸರಿಯಾದ ಸಮಯಕೆ ಕಾದಿದೆ
ಇಂದು ಹಾರಲೋ ನಾಳೆ ಹಾರಲೊ
ತಿಳಿಯದಾಗಿದೆ ಹಕ್ಕಿಗೆ
ಕೆಳಗೆ ಜಾರಲೊ ಮೇಲೆ ಜೀಕಲೊ
ಯೋಚಿಸಿದೆ ಇಲ್ಲ ಹೀಗೆ ಸಾಯಲೊ
ಕೊನೆಗೂ ಮೋಡ ಚದುರಿದೆ ಮಳೆಯು ನಿಂತಿದೆ
ಕಾಲ ಕೂಡಿ ಬಂದಿದೆ
ಬಣ್ಣದ ರೆಕ್ಕೆಯ ಬೀಸುತ ಜಂಬದಿ
ಹಕ್ಕಿ ಗಗನಕೆ ಹಾರಿದೆ...
No comments:
Post a Comment