Saturday, March 28, 2009

ಯಾವ ಮೋಹನ ಮುರಳಿ

ಎಲ್ಲೆ ಮೀರಿ ಎಲ್ಲಿ ಹೋಗುವೆ
ಇಲ್ಲಿ ಎಲ್ಲಾ ನಿನ್ನದೆ
ಸುಖವು ಉ೦ಟು ಮನದ ಒಳಗಡೆ
ಅಲ್ಲ ಹೊರಗಿನ ಜಗದಲಿ

ಪ್ರೀತಿ ಮಾತ್ರವೆ ಉಳಿವುದು ಕಡೆಗೆ
ಬೇರೇನು ಬೇಕು ಬದುಕಲಿ
ಸುಮ್ಮಸುಮ್ಮನೆ ಯಾಕೆ ಓಡುವೆ
ಕೈಗೆ ಸಿಗದ ಜಿ೦ಕೆಗೆ

ತೃಪ್ತಿ ಉ೦ಟು ಉ೦ಟು ನೆಮ್ಮದಿ
ನಿನಗೆ ನಿನ್ನ ಈ ಜಗದಲಿ
ಯುದ್ಧ ಮಾಡು ಮಾಡಿ ಜಯಿಸು
ನಿನ್ನದೇ ರ೦ಗದ ರಣದಲಿ





No comments: