Sunday, June 14, 2009

ಪ್ರೀತಿ-ಮೋಸ

ಸುಪ್ತ ಮನಸಿನ ಸಪ್ತ ಸ್ವರಗಳ
ವೀಣೆಯನೇಕೆ ನೀ ಮೀಟಿದೆ?
ಅಂಧ ಪ್ರೀತಿಯ ಮಾಯದಿ ತಿವಿದು
ಕನಸಿನ ಖೆಡ್ಡದಿ ನೂಕಿದೆ.

ಹಾಲಿನ ಹೊಳಪು ; ರೇಷಿಮೆಯ ತಲೆಗೂದಲು
ಜಿಂಕೆಯ ಕಂಗಳು ; ಜೀವ ಕೊಡುವ ನಗು
ಎಂದು ಕವಿಯು ಗೀಚಿದ
ನಿನ್ನ ರೂಪವ ನೋಡಲು.

ಪ್ರಾಣ ಹೋಯಿತು ಉಸಿರು ನಿ೦ತಿತು
ಒಳಗೆ ಪ್ರಳಯವೇ ಆಯಿತು
ಬ೦ದು ಬಡಿಯಲು ಘೋರ ಸಿಡಿಲು
ಕಣ್ಣು ಕಾಣದೆ ಹೋಯಿತು.

ಕಂಡಿರಲಿಲ್ಲ ಪ್ರೀತಿಯ ಕೇಳಿರಲಿಲ್ಲ
ಬ೦ದು ನೀ ಎದುರಿಗೆ ದುರಂತವಾಯಿತಲ್ಲ
ನನ್ನ ಹೃದಯವನೇ ಕದ್ದು
ಮೋಸ ಮಾಡಿದೆಯಲ್ಲ….
-Sriharsha

No comments: