Friday, July 1, 2011

ಒಂದು ಸುಂದರ ಪಯಣ

ಕಿರುಬೆರಳಿಗೆ ಕಿರುಬೆರಳು ತಾಕಿತ್ತು
ಗುಳಿಗಳಲ್ಲಿ ನಗುವು ಮೂಡಿತ್ತು
ನೀ ನಗಲು ಚಂದ್ರ ನಾಚಿತ್ತು
ಇದೇ ಗುಂಗಿನಲ್ಲಿ ನಮ್ಮೀರ್ವರ ಪಯಣ ಸಾಗಿತ್ತು

ನಿನ್ನ ಮಾತಿನಲ್ಲಿ ಗಮನವೇ ಇರಲಿಲ್ಲ
ಅದರ ಧಾಟಿಯ ನನಗೆ ತಿಳುವಳಿಕೆಯಿರಲಿಲ್ಲ
ನಿನ್ನ ಕಂಗಳಲ್ಲಿ ಮುಳುಗಿದ್ದೆ
ಇಂದು ನಿನ್ನ ನಾ ಮನಸಾರೆ ಪ್ರೀತಿಸಿದ್ದೆ

ತಾವರೆಯ ಮೇಲಿನ ಹನಿಯಂತೆ
ನಿನ್ನ ತುಟಿಯ ಮೇಲೆ ಮುತ್ತಿತ್ತು
ಚಂದ್ರನ ಪ್ರೀತಿಗೆ ಹನಿಗಳು ನಾಚುವಂತೆ
ನನ್ನೆದುರು ನಿನ್ನ ಕಂಗಳು ಬಾಗಿತ್ತು

ನಿನ್ನ ಉಸಿರು ಏರಿ ಇಳಿದು
ನನ್ನ ಎದೆಯ ಕೋಣೆಗಳನ್ನು ಬಡಿದು
ನನಗೆ ಪ್ರೀತಿಯ ಬೆಳಕನ್ನು ಹರಡಿ
ಸ್ವತಂತ್ರನನ್ನಾಗಿಸಿತು ಸರಪಳಿಗಳನ್ನು ಕಡೆದು

No comments: