ಕನಸೊಂದು ಬಂದಿತ್ತು ಕಥೆಯೊಂದ ಹೇಳಿತ್ತು
ಹೂವಾಗಿ ಮೆರೆದಿದ್ದೆ ಆ ತೋಟದಲ್ಲಿ
ಕೆಂಪಿತ್ತು ಹಸಿರಿತ್ತು ಬಣ್ಣಗಳೆ ತುಂಬಿತ್ತು
ಆಶ್ಚರ್ಯ ಉಕ್ಕಿತ್ತು ಜನರ ಆ ನೋಟದಲ್ಲಿ
ಪೂಜೆಗೆ ಇಡುವರೊ ಮುಡಿಗೇರಿಸುವರೊ
ಇನ್ನೊಬ್ಬರಿಗೆ ಕೊಡುವರೋ ತಿಳಿಯದಾದೆ
ನನ್ನನ್ನು ಗುಚ್ಚದಲಿ ಬಿಡುವರೋ ಅಥವ
ಬಾಡಲೆಂದು ನಗುವರೋ ಅರಿಯದಾದೆ
ಅಷ್ಟರಲ್ಲಿ ಬಂತೊಂದು ದೊಡ್ಡ ಕಬ್ಬಿಣದ ಕತ್ತಿ
ಆಕಡೆಯಲ್ಲೊಂದು ದುಂಬಿ ಹಾರಿತ್ತು ತನ್ನ ರೆಕ್ಕೆ ಬಿಚ್ಚಿ
ಯಾವುದಕ್ಕೆ ಬಲಿಯಾಗುವೆನೊ ಕಾದೆನು ಬೆವರು ಹತ್ತಿ
ಕಾಲುಗಳು ಅದರಿ ಗಡ ಗಡ ನಡುಕದಲಿ ಹಲ್ಲು ಕಚ್ಚಿ
ಜ್ನಾನ ತಪ್ಪಿ ಕಣ್ಣು ಮುಚ್ಚಿ ತೆಗೆಯುವುದರೊಳಗೆ
ಯಾವುದೊ ಬಾಗಿಲು ಕಂಡಿತು ನನ್ನ ಉಸಿರೇ ನಿಂತಿತ್ತು
ನನ್ನ ಕೊಚ್ಚಿ ಮೆಣಸು ಹಚ್ಚಿ ತುರುಕುವರೆ ಗಂಟಲೊಳಗೆ?
ಅಯ್ಯೊ ನಾನು ಅಹಾರವಲ್ಲ ಹೂವೆಂದು ತಕ್ಷಣ ಹೊಳೆದಿತ್ತು
ಪಾಪ ನಾನು ಸಣ್ಣ ಹೂವು ಏನು ಮಾಡಲು ಸಾಧ್ಯ
ನೋಡಕ್ಕೆ ಮಾತ್ರ ಚಂದ ಶಕ್ತಿ ಮಾತ್ರ ಶೂನ್ಯ
ತಲೆ ಸರ್ ಹೋಗಿ ಕಣ್ಣು ಕಂಡಂತಾಗಿ
ರೆಪ್ಪೆ ಬಿಚ್ಚಿ ಮತ್ತೆ ನೋಡಲು ನಾನು ಸದ್ಯ
ನಿಜ ನಾನರಿತೆ ಸಾರವನೆಲ್ಲ ಗ್ರಹಿಸಿದೆ
ಅಂತು ಅಲ್ಲಿಗೆ ಬಂದಿದ್ದೆ ಕಂಗಳನ್ನು ತುಂಬಿಕೊಂಡು
ಇದು ಕನಸಲ್ಲ ನನಸು ಕಂಡಿದ್ದೆ ಭಗವಂತನ ಪಾದ
ಅವನು ನನ್ನ ಮುಂದೆಯೇ ನಿಂತಿದ್ದ ನನ್ನನ್ನೇ ನೋಡಿಕೊಂಡು
No comments:
Post a Comment