ಯೋಚಿಸಬೇಡವೇ ಸಖಿ ನೀ ಬಹಳ
ಹು ಅಂದುಬಿಡು ಒಂದು ಸಲ
ನೀ ನನ್ನೆದುರು ಬಂದೊಡನೆ
ಹೊಳಿಯದೆ ಹೋಯಿತು
ತಲೆಯಲ್ಲಿ ಬರದೆಹೋಯಿತು
ಮಾತುಗಳು ನೀ ಎದುರು ನಿಂದೊಡನೆ
ಯೋಚಿಸಬೇಡವೇ ಸಖಿ ನೀ ಬಹಳ
ಹು ಅಂದುಬಿಡು ಒಂದು ಸಲ
ನನ್ನ ಹತ್ತಿರವಿದ್ದರು ನೀನು
ಗಟ್ಟಿಯಾಗಿ ಅಪ್ಪಲಾಗದೆ
ಹಿಡಿದು ಮುತ್ತಿಡಲಾರದೆ
ತತ್ತರಿಸಿದೆ ಚಡಪಡಿಸಿದೆ ದಡ್ಡನಂತೆ ನಾನು
ಯೋಚಿಸಬೇಡವೇ ಸಖಿ ಬಹಳ
ಹು ಅಂದುಬಿಡು ಒಂದು ಸಲ
ನಾನು ಬರುವೆನೆ ಯೋಚನೆಯಲಿ
ನನ್ನ ಸ್ಥಾನವೆಲ್ಲಿದೆ ನಿನ್ನಲ್ಲಿ
ಒಂದು ಸರಿ ನಿಜ ಹೇಳು
ಹೋಗಲಿ ಬಂದೆನಾ ಕನಸಿನಲಿ
ಯೋಚಿಸಬೇಡವೇ ಸಖಿ ಬಹಳ
ಹು ಅಂದುಬಿಡು ಒಂದು ಸಲ
ಅಷ್ಟು ನೆಪಗಳ ಹೂಡಿ ಕರೆದೆ
ಮಾತಿಗೆ ನಿನ್ನ ಎಳೆದೆ
ಯೋಚಿಸಿ ಹೇಳು ಸರಿಯಾಗಿ
ನಿನ್ನ ಆಸೆಯು ನನ್ನ ಹೆಸರ ಹೇಳದೆ?
ಯೋಚಿಸಬೇಡವೇ ಸಖಿ ಬಹಳ
ಹು ಅಂದುಬಿಡು ಒಂದು ಸಲ
ನನ್ನ ಉಸಿರು ನೀನು, ನನ್ನ ಪ್ರೀತಿ ನೀನು
ಉಸಿರಿಗೆ ಉಸಿರು, ಪ್ರೀತಿಗೆ ಪ್ರೀತಿ
ಅಲ್ಲವೆ ಜಗದ ನಿಯಮ, ಯಾಕೊ
ಆಗಿದೆ ನನ್ನ ಪ್ರೀತಿಗೆ ನಿನ್ನ ದ್ವೇಷದ ಭೀತಿ
ಯೋಚಿಸಬೇಡವೇ ಸಖಿ ಬಹಳ
ಹು ಅಂದುಬಿಡು ಒಂದು ಸಲ
ನಿನ್ನ ನಾ ಮುದ್ದಿಸುವೆ, ಮಗುವಂತೆ ರಮಿಸುವೆ
ನನ್ನ ಲೋಕದ ರಾಣಿ ಮಾಡಿ,ಸಿಂಹಾಸನದಿ ಕೂರಿಸುವೆ
ಇನ್ನೇನು ಅನುಮಾನ, ಈಗಲಾದರು ಒಪ್ಪಿಕೊ
ನಾ ನಿನ್ನ ಹೆಸರಲೆ ಜೀವಿಸುವೆ
ಯೋಚಿಸಬೇಡವೇ ಸಖಿ ಬಹಳ
ಹು ಅಂದುಬಿಡು ಒಂದು ಸಲ
2 comments:
good one. keep posting..
regards
Prashanth
Padya chennagide bahaLa
Neenobba prachanDa kuLLa ! :)
Post a Comment