Saturday, October 16, 2010

ಹಳ್ಳಿ ಮುಕ್ಕನ್ ಹುಡುಕಾಟ ಹುಡುಗಾಟ

ಎಲ್ಲಿಂದ್ಲೊ ಬಂದು ನಮ್ಮ ಹಳ್ಳಿ ಮುಕ್ಕ
ಜೀವ್ನಾನ ನೋಡಲೆಂದು ಪ್ಯಾಟೆ ಹೊಕ್ಕ

ಮುಕ್ಕಂಗೆ ಗೊತ್ತಿತ್ತು ಕಷ್ಟ ಸುಖ
ಕುಂಟು ಕುರ್ಡು ಕೆಪ್ಪು ಕಿವ್ಡು
ಕಸಾಲೆ ಖಾಯಿಲೆ ಸರಗಳ ಮಾಲೆ
ಹೀಗೆ ಏಟೋಂದಿತ್ತು ಹಳ್ಳೀಲ್ ದುಃಖ

ಎಲ್ಲಿಂದ್ಲೊ ಬಂದು ನಮ್ಮ ಹಳ್ಳಿ ಮುಕ್ಕ
ಜೀವ್ನಾನ ನೋಡಲೆಂದು ಪ್ಯಾಟೆ ಹೊಕ್ಕ

ಇದ್ರ ಮೇಲೆ ಏನಿರ್ತದೆ
ಪ್ಯಾಟೆ ಜೀವ್ನ ಇನ್ನ ಸಂದಾಗಿರ್ತದೆ
ಅವ್ರೆಲ್ ಕಂಡ್ರು ಕಷ್ಟ ದುಃಖ
ಪ್ಯಾಟೆನಾಗೆ ಸುಖವೋ ಸುಖ

ಎಲ್ಲಿಂದ್ಲೊ ಬಂದು ನಮ್ಮ ಹಳ್ಳಿ ಮುಕ್ಕ
ಜೀವ್ನಾನ ನೋಡಲೆಂದು ಪ್ಯಾಟೆ ಹೊಕ್ಕ

ಆದ್ರು ಯಾಕೊ ಪ್ಯಾಟೆ ಜನ
ಹಾಕೊಂಡಿರ್ತಾರೆ ಹಳ್ಳೆಣ್ಣೆ ಕಣ್ಣ
ಅಷ್ಟೋಂದ್ ಗಲಾಟೆ ಮಧ್ಯ ಕೂಡ
ಮುಕ್ಕ ಕಂಡ ಭಾರಿ ಮೌನ

ಎಲ್ಲಿಂದ್ಲೊ ಬಂದು ನಮ್ಮ ಹಳ್ಳಿ ಮುಕ್ಕ
ಜೀವ್ನಾನ ನೋಡಲೆಂದು ಪ್ಯಾಟೆ ಹೊಕ್ಕ

ಪ್ಯಾಟೆ ಮಾವಿನ್ ಹಣ್ಣಿನ್ ಥರ
ಮುಖ ಹಣ್ಣು ಮನ್ಸು ವಾಟೆ
ಗುಟ್ಟು ಗೊತ್ತಾಯ್ತು ಮುಕ್ಕಂಗದ್ರ
ಎಲ್ರುದು ಅದೇ ಹಣೇ ಭರ

ಎಲ್ಲಿಂದ್ಲೊ ಬಂದು ನಮ್ಮ ಹಳ್ಳಿ ಮುಕ್ಕ
ಜೀವ್ನಾನ ನೋಡಲೆಂದು ಪ್ಯಾಟೆ ಹೊಕ್ಕ

ವಿಸ್ಯ ಗೊತ್ತಾಗ್ ಓಡಿದ ಮುಕ್ಕ
ಜನ್ರನ್ ನೋಡಿ ಆಗಿ ಪುಕ್ಕ
ನಿಲ್ಲೂ ಇಲ್ಲ ಸಿಗೋ ತಂಕ
ವಾಪಸ್ ಮುಕ್ಕ ಹಳ್ಳಿ ಹೊಕ್ಕ

ಎಲ್ಲಿಂದ್ಲೊ ಬಂದು ನಮ್ಮ ಹಳ್ಳಿ ಮುಕ್ಕ
ಜೀವ್ನಾನ ನೋಡಲೆಂದು ಪ್ಯಾಟೆ ಹೊಕ್ಕ

No comments: