ಮೊದಲ ಬಾರಿ ನೋಡಿದೆ
ಮಾತು ಕೂಡ ಆಡಿದೆ
ಇಷ್ಟು ಸಮಯ ಕಾದಿಹೆ
ನನಗೆ ನೀನೆ ಎಂದೆನಿಸಿದೆ
ಕಾಯುತಿದ್ದೆ ನಿನ್ನನು
ಕೇಳುತಿದ್ದೆ ದೇವರನ್ನು
ಉತ್ತರವಿಂದು ಬಂದಿದೆ
ನನಗೆ ನೀನೆ ಎಂದೆನಿಸಿದೆ
ಮನಸಿನ್ನೂ ಒಪ್ಪದು
ನಿಜವಿದೆಂದು ಅನಿಸದು
ಆದರೂ ಒಳದನಿ ಹೇಳುತಿದೆ
ನನಗೆ ನೀನೆ ಎಂದೆನಿಸಿದೆ
ಎಷ್ಟಾದರೂ ಸತಾಯಿಸು ನೀನು
ನಿನ್ನ ಪರೀಕ್ಷೆಗಳಿಗೆ ಸಿದ್ಧ ನಾನು
ನಾನು ಮತ್ತೆ ಮತ್ತೆ ಸಾರಿದೆ
ನನಗೆ ನೀನೆ ಎಂದೆನಿಸಿದೆ
No comments:
Post a Comment