ಸಂಜೆ ವೊತ್ನಲ್ ಹೆಂಡ ಹುಯ್ಕೊಂಡ್ ಕುಂತ್ಕೊಂಬಿಟ್ರೆ ಈರ
ಲೋಕಾನೆಲ್ಲ ಮರ್ತೋಯ್ತಾನೆ ಹೆಂಡದ್ ಮತ್ನಲ್ ಪೂರಾ
ನಂಜಿ ಏನ್ರಾ ಪೊರ್ಕೆ ಹಿಡ್ದು ಅಂಗ್ಡಿ ತಾವ ಬಂದ್ರೆ
ಈರಂಗಂತು ಎಂಥ ಯೇಟು ಪೊರ್ಕೇಲ್ ಬೀಳ್ತಾವಂದ್ರೆ
ಸಾರಯಿ ಸುರ್ಯೋ ಮುನ್ಯ ಪಾಪ ಕಾಲಿಗ್ ಯೇಳ್ತಾನ್ ಪಾಠ
ಅಂಗ್ಡಿ ಅಲ್ಲೇ ಬಿಟ್ಟು ಓಡ್ತಾನ್ ಬೇಡ ಔನ್ಗೂ ತೊಂದ್ರೆ
ಗೊರ್ಯ ನಿಂಗೆ ಗೊರ್ಕೆ ಬಿಟ್ಟು ಬೇರೇನ್ ಗೊತ್ತಾಯ್ತೈತೆ
ಹೆಂಡದ್ ಮತ್ತು ಜಾಸ್ಥಿ ಆಗಿ ಕಿವಿ ಕಟ್ಟ್ಕೊಂಡೈತೆ
ಹೆಂಡ್ರು ಮಕ್ಳು ಇಲ್ದಿರೌನು ನಿಂಗೇನಪ್ಪ ಒಬ್ನೇ ನೀನು
ನಿನ್ ಹತ್ರ ತನ್ ದುಖಃ ತೋಡೋ ಈರ, ಎಂಥ ದಡ್ಡ ಔನು
ಆದ್ರು ಈರಂಗ್ ನಂಜಿ ಮೇಲೆ ಸಿಕ್ಕಾಬಟ್ಟೆ ಪ್ರೀತಿ
ಬೇರೇ ಯಾರು ನೋಡ್ಕೋತಾರೆ ಇವ್ನನ್ ಕೂಸಿನ್ ರೀತಿ
ನಂಜಿಗೂನು ಅಷ್ಟೆ ಪಾಪ, ಈರ ಅಂದ್ರೆ ಪ್ರಾಣ
ಒಳ್ಳೇವ್ಳವ್ಳು ಈರಾನೇವೆ ತಿಕ್ಕ್ಲು ಹಿಡ್ದ ಕೋಣ
ಮನೇಗ್ ಬೇಗ ಬರ್ಲಿ ಅಂತ ಗದುರ್ಸೋದೆ ತಪ್ಪ
ರಾಮಾ ಕೃಷ್ಣ ಎಲ್ಲಾರ್ ಕಥೆಲೂ ಎಂಗ್ಸ್ರಾ ಮನ್ಸೇ ಕಪ್ಪಾ
ಗಂಡ್ಸು ನೀನು ಜಗತ್ಗೆಲ್ಲ ಒಳ್ಳೇ ಮನ್ಸಾ ಆದ್ರೆ ಸಾಕಾ
ಮನೇಲೂನೂ ಸರೀ ಇರ್ಬೇಕ್ ತಿಳ್ಕೋಳಯ್ಯ ಬೆಪ್ಪ
No comments:
Post a Comment