Friday, July 1, 2011

ನಿನಗಾಗಿ

ವರ್ಣಿಸಲು ಹೊರಟೆ ನಾನವಳನ್ನು
ಅವಳ ಸೌಂದರ್ಯ ಸಾಗರವನ್ನು
ಮಾತುಗಳು ಸಾಲದಾದವು ಹೊಗಳಲು
ಮಾಡಲು ಅವಳ ಗುಣಗಾನವನ್ನು

ಹಂಸ ವೆನ್ನಲೇ ಇಲ್ಲ ಜಿಂಕೆಯೊ
ಇಲ್ಲ ಸಾಟಿಯಿಲ್ಲದ ನಾಟ್ಯ ರಾಣಿಯೊ
ನಗುವಲ್ಲೂ ಹಾಡುವ ಕೋಗಿಲೆಯೊ
ಅಥವ ಕಣ್ಣಿಗೊತ್ತಿಕೊಳ್ಳುವ ದೇವತೆಯೊ

ಬಟ್ಟಲು ಕಣ್ಣಿನವಳಿವಳು ಸುವರ್ಣ ವರ್ಣಳು
ಚೂಪು ಮೂಗಿನಿಂದ ಚಾಪು ಮೂಡಿಸಿದವಳು
ಮಾತಿನಿಂದ ಎಲ್ಲವನ್ನೂ ಮೋಡಿಸುವವಳು
ಪ್ರೀತಿಸುವ ಮನದ ಪಟ್ಟದ ರಾಣಿ ಇವಳು

ಏನೋ ಈಕೆಗೆ ಭಯವಂತೆ
ಯಾವುದೋ ಅಗೋಚರ ಯೋಚನೆಯಂತೆ
ನಾಳೆಯೆಂಬ ಬಲೆಯ ಚಿಂತೆಯಂತೆ
ಆಸೆಗಳು ಛಿದ್ರವಾಗುವ ಭೀತಿಯಂತೆ

ಹೇಗೆ ಬಣ್ಣಿಸಲಿ ನಾನಿವಳನ್ನು
ಮಾನವ ಸ್ವರೂಪದ ಕಲೆಯನ್ನು
ಕಲೆಯೇ ಇವಳೋ ಇವಳೇ ಕಲೆಯೋ
ಉತ್ತರಿಸಲಸಾಧ್ಯ ಈ ಎಲ್ಲಾ ಪ್ರಶ್ನೆಗಳನ್ನು

No comments: