Friday, July 1, 2011

ಬಣ್ಣದ ಕಾರಂಜಿ

ಬಣ್ಣಗಳ ಕಾರಂಜಿ
ಪುಟಿದೆದ್ದಿತ್ತು ಬಾನಿನಲಿ
ಮೇಲೇರಿ ಕೆಳಗೆ ಜಿನುಗಿ
ರಂಗೇರಿಸಿತ್ತು ಕಣ್ಣಿನಲಿ

ಮೂರ್ನಾಲ್ಕು ನಾಲ್ಕೈದು
ಸಾಲಾಗಿ ಹರಿದಿತ್ತು ಕಾರಂಜಿ
ಬಣ್ಣಕ್ಕೆ ಸರಿಯಾಗಿ ಹಾಡಿತ್ತು ಆಡಿತ್ತು
ಬೆರೆತಂತೆ ಜೇನು ಹಾಲಿನಲಿ

ಬೇಕಾದಂತೆ ಬಳುಕಿ ತುಳುಕಿ
ನವಿಲನು ನಾಚಿಸುವ ಕಾರಂಜಿ
ಮಳೆಯಲ್ಲಿ ಮಾತ್ರ ಕುಣಿಯುವುದು
ನವಿಲು ಯಾವುದೋ ಕಾಡಿನಲಿ

ನೀರೇನು ಹಾಡೇನು ಎಂಥದ್ದು ಬೇಕಿಲ್ಲ
ನಾ ಕಂಡೆ ಇಂಥದ್ದೆ ಕಾರಂಜಿ
ಕಾಡೇನು ನವಿಲೇನು
ತಿಳಿಯಲ್ಲ ಬಿದ್ದಾಗ ಪ್ರೀತಿಯಲಿ

No comments: