Thursday, July 7, 2011

ಅಂದುಕೊಂಡಿದ್ದೆ

ಅಂದುಕೊಂಡಿದ್ದೆ ನೀನು ಚೆಲುವೆಯೆಂದು
ನನ್ನ ದೇವತೆ ನೀನೆಂದು ತಿಳಿಯಿತಿಂದು
ಅಂದುಕೊಂಡಿದ್ದೆ ನೀನು ಸುಗುಣಳೆಂದು
ನಿಲಿಸಲಾರೆ ನಿನ್ನ ಗುಣಗಾನವಿಂದು

ಅಂದುಕೊಂಡಿದ್ದೆ ನೀ ರೂಪರಾಶಿಯೆಂದು
ತಿಳಿಯಿತು ನಿನಗಿಂತ ನಿನ್ನ ಮನಸೆ ಅಪರೂಪವೆಂದು
ಅಂದುಕೊಂಡಿದ್ದೆ ನಿನ್ನ ಗುಳಿ ಚೆಂದವೆಂದು
ಆದರೆ ತಿಳಿಯಿತು ನನ್ನ ಹೃದಯವೇ ನಿನ್ನ ಬಳಿಯಿದೆಯೆಂದು

ಅಂದುಕೊಂಡಿದ್ದೆ ನೀನು ನನ್ನವಳೆಂದು
ಆದರೆ ಆಗಿರುವೆ ನಾನು ನಿನ್ನವನಿಂದು
ಅಂದುಕೊಂಡಿದ್ದೆ ಜೀವನ ನಿನ್ನೊಡನೆಯೆಂದು
ಆಸೆಯಾಗಿದೆ ಮರು ಜನ್ಮದಲ್ಲೂ ನಿನ್ನ ಜೊತೆಯಿರಲೆಂದು

ಅಂದುಕೊಂಡಿದ್ದೆ ನೀನು ಅಸಮಾನ್ಯಳೆಂದು
ಗೊತ್ತಾಗಿದೆ ಪರಮಾತ್ಮ ನಿನ್ನೊಳನಿಹನೆಂದು
ಅಂದುಕೊಂಡಿದ್ದೆ ನಿನ್ನ ಪ್ರೀತಿಸುವೆನೆಂದು
ನಿನ್ನ ಪ್ರೀತಿಯಿಲ್ಲದೇ ಬದುಕೇ ಇಲ್ಲವೆಂದು ತಿಳಿದಿದೆ ಇಂದು

No comments: