ಕತ್ತಲಲ್ಲಿ ಎಲ್ಲೋ ಕುಳಿತು
ಹುತ್ತದಲಿ ಬೆಚ್ಚನೆ ಅವಿತು
ನೆತ್ತರಲಿ ತಣ್ಣನೆ ಬೆರೆತು
ಕುಳಿತಿದ್ದೆ ಅಂದು ಏಕಾಂಗಿಯಾಗಿ
ಹಾವು ಹುಳಗಳು ಕಚ್ಚಿದರು ಕೂಡ
ಚಳಿ ಗಾಳಿ ಮೈ ಚುಚ್ಚಿದರು ಕೂಡ
ಇರುಳಲಿ ಮನ ಬೆಚ್ಚಿದರು ಕೂಡ
ಕುಳಿತಿದ್ದೆ ಅಂದು ಏಕಾಂಗಿಯಾಗಿ
ಯಾರು ನೀನು ತಿಳಿದಿರಲಿಲ್ಲ
ನನ್ನ ಪ್ರಾಣ ಜೀವಿಸಿರಲಿಲ್ಲ
ನನ್ನ ಹೃದಯ ಬಡಿದಿರಲಿಲ್ಲ
ಕುಳಿತಿದ್ದೆ ಅಂದು ಏಕಾಂಗಿಯಾಗಿ
ಭಾವೋದ್ವೇಗ ಆಗಸಕ್ಕೇರಿ
ಸಮುದ್ರದಲೆಯ ರಭಸವ ಮೀರಿ
ನಿನ್ನ ಜೀವ ಬಂದು ನನ್ನೊಡನೆ ಸೇರಿ
ನೀನು ನಾನು ಒಂದಾಗಿ
ಕುಳಿತೆವು ಇಂದು ಏಕಾಂಗಿಯಾಗಿ
No comments:
Post a Comment