ಒಂದಾನೊಂದು ಕಾಲ ಅದು, “Shopping Mall” ಗಳೆಲ್ಲ ತುಂಬಿ ತುಳುಕುತ್ತಿದ್ದ ಕಾಲ. ಸಮಯಕ್ಕೆ ಸರಿಯಾಗಿ “Hike” ಸಿಗುತ್ತಿದ್ದ ಕಾಲ, “Attrition Rate” ಜಾಸ್ತಿ ಇದ್ದ ಕಾಲ. ಅದನ್ನ ಕಡಿಮೆ ಮಾಡಕ್ಕೆ “software company” ಗಳು “Employees” ನ “onsite” ಕಳುಹಿಸುತ್ತಿದ್ದ ಕಾಲ. ಆಗ ಎಲ್ಲರಿಗೂ ಕೆಲಸವೋ ಕೆಲಸ, ಕಂಪೆನಿಗಳೋ ಕಂಪೆನಿಗಳು. ಆಗ “Recession” ಅನ್ನುವುದನ್ನೆ ಕೇಳದಿದ್ದ ಕಾಲ. ಒಂದಾನೊಂದು ಕಾಲ ಅದು.
ಆ ಕಾಲದಲ್ಲಿ ನಾನು ನನ್ನ ಕಂಪೆನಿಯಲ್ಲಿ ರಾಜನ ಹಾಗೆ ಮೆರೆಯುತ್ತಿದ್ದೆ. ಇಂಗ್ಲಿಷೆ ಬರದ ನನಗೂ “VISA” ಮಾಡಿಸಿಕೊಟ್ಟಿದ್ದರು ಪುಣ್ಯಾತ್ಮರು. ಸಾಲದು ಅಂತ ಒಂದು ದಿನ “onsite” ಗೂ ಕಳುಹಿಸಿಬಿಟ್ಟರು ೬ ತಿಂಗಳಿಗೆ. ನನಗೆ ಖುಷಿಯೋ ಖುಷಿ, ಮನೆಯಲ್ಲಿ ಮಾತ್ರ ಭಯ. “ನಮ್ ಜ್ಯೋತಿಷಿ ಗಳು ಹೇಳ್ತಿದ್ರು ಯಾರೊ ಬೇರೆ ಜಾತಿ ಹುಡುಗಿಯನ್ನ ಕಟ್ಕೊತಾನಂತೆ” ಅಂತ ಹೆದರಿದ್ದರು. ನಾನು ಮನಸಲ್ಲೇ ನಗುತ್ತಿದ್ದೆ “ ಅಷ್ಟೆಲ್ಲ ಭಾಗ್ಯ ನನಗೆಲ್ಲಿ ಅಂತ”. ಸರಿ, ನಾನೂ America ಕ್ಕೆ ಹೊರಟೇಬಿಟ್ಟೆ. ಜೊತೆಗೆ ಚಟ್ನೀ ಪುಡಿ, ಮೆಣಸಿನ ಪುಡಿ, ಪುಳಿಯೋಗರೆ ಗೊಜ್ಜು, ಇವೆಲ್ಲವೂ ಹೊರಟವು. ಅವುಗಳು ಸಾಲದು ಅಂತ ನಮ್ಮಪ್ಪನ ಉಚಿತ ಸಲಹೆ ಬೇರೆ. “ಅಲ್ಲಿ ನಡೆಯೊವಾಗ ನೆಲ ನೋಡ್ಕೊಂಡೆ ನಡಿ. ಇಲ್ಲಾ ಅಂದ್ರೆ ಯಾವ್ದೊ ಬಿಳಿ ಹುಡುಗಿ ಮಾಟ ಮಾಡಿ ಬಿಡ್ತಾಳೆ” ಅಂತ!!
America ಆಹಾ ಎಂಥ ದೇಶ? ಅಲ್ಲಿನ ಗಾಳಿ ಬೇರೆ, ಅಲ್ಲಿನ ಸೌಂದರ್ಯ ಬೇರೆ, ಅಲ್ಲಿನ ಸ್ವಾತಂತ್ರ್ಯ ದ ಬಗ್ಗೆ ಹೇಳದೇ ಬೇಡ…ಹಿಂಗೆಲ್ಲ ಅಂದುಕೊಂಡು Americaದಲ್ಲಿ ಕಾಲಿಟ್ಟೆ. ಆದ್ರೆ ಅಲ್ಲಿ ಕಂಡಿದ್ದೇನು? ಅದೇ “Indians”, ಅದೇ “Indian Culture”. ೨೦೨೦ ಯ ಭಾರತಕ್ಕೆ ಬಂದಹಾಗೆ ಆಗಿತ್ತು. ಸರಿ ಹಾಳಾಗಿ ಹೋಗಲಿ ಅಂತ ಬೈಕೊಂಡು “Room” ಕಡೆ ಸಾಗಿದೆ. ಹೋಗುವಾಗ ದಾರಿಯಲ್ಲಿ “statue of liberty” ಹುಡುಕಕ್ಕೆ ಹೊರಟರೆ ನನಗೆ ಕಂಡಿದ್ದೆ ಬೇರೆ!!! ಅದೇ ನಮ್ “ Pittsburg Venkateswara”…
ಅಮ್ಮ “Phone” ನಲ್ಲಿ ಹೇಳಿದ್ದೇ ಹೇಳಿದ್ದು, ಬರೋವಾಗ ವೆಂಕಟೇಶ್ವರ ಪ್ರಸಾದ ತಗೊಂಡು ಬಾ ಅಂತ. ಹಂಗೆ ಎನಾದ್ರು ಪೂಜೆ ಮಾಡ್ಸು ಅಂತನೂ ಹೇಳ್ತಿದ್ರು. ಸರಿ ಏನ್ ಪೂಜೆ ಮಾಡ್ಸೋದು ಅಂತ ಯೋಚಿಸ್ತಿರೋವಾಗಲೇ ಆಗಿದ್ದು ನನಗೆ ಸ್ವಾಮಿ ಜಿಮ್ಮಾನಂದರ ದಿವ್ಯ ದರ್ಶನ. ಈ ಜಿಮ್ಮಾನಂದ ಅಂದರೆ “Jimmy” ಇಸ್ಕಾನ್ ಸೇರಿ ಆದ ಆನಂದದಿಂದ ಬಂದ ಹೆಸರು. ಈ ಜಿಮ್ಮಾನಂದರು ಅದೆಷ್ಟು ಪವಾಡಪುರುಷರು ಅಂದ್ರೆ, ಭಾರತೀಯರು ಕೂಡ ತಮ್ಮ ಜಾತಕ ತೋರಿಸಲು ಅವರ ಹತ್ತಿರವೇ ಬರುತ್ತಿದ್ದರಂತೆ. ಅಂತು ಅಲ್ಲೂ ಭಾರತೀಯರಿಗೆ ಜಾತಕ ತೋರಿಸುವ ಹುಚ್ಚು ಬಿಟ್ಟಂಗಿರಲಿಲ್ಲ.
ನಾನು ಜಿಮ್ಮಾನಂದ ಸ್ವಾಮಿಗಳೆದುರಿಗೆ ನನ್ನ ಮನದ ಆಸೆಯನ್ನು ತೋಡಿಕೊಂಡಾಗ ಅವರು ಅದೇನೋ ಮಂತ್ರ ಪಠಿಸಿ ಕೈಯಿಂದ ಬೂದಿಯನ್ನು ಕೊಟ್ಟು ಭಾನುವಾರ ಬರಲು ಹೇಳಿದರು. ಭಾನುವಾರ ನಾನು ಹೋಗಿ ನೋಡಿದಾಗ ಜಿಮ್ಮಾನಂದರ ಕೈಯಲ್ಲಿ ದೊಡ್ಡ ಪಟ್ಟಿಯನ್ನೇ ಹಿಡಿದುಕೊಂಡಿದ್ದರು “ಯಾವ ಪೂಜೆ ಮಾಡಿಸಬೇಕು? Green Card ಸೇವೆಯೇ, VISA ಸೇವೆಯೇ ಅಥವ Credit Card ಸೇವೆಯೇ? “ ಅಯ್ಯೋ ಉರುಳು ಸೇವೆ, ಅರ್ಚನೆ, ಅಭಿಷೇಕ, ಹೀಗೆಲ್ಲ ಕೇಳಿದ್ದೆ, ಇದ್ಯಾವುದಪ್ಪ ವಿಚಿತ್ರ ಸೇವೆ ಅಂತ ಯೋಚಿಸುವಷ್ಟರಲ್ಲಿ, ನನ್ನ ಕೈಗೆ ಅವರು ಒಂದು “card” ಇಟ್ಟು, ಇದು ನನ್ನ “Business Card” ನನ್ನ “Email-ID” ಗೆ ದಯವಿಟ್ಟು ಯಾವ ಸೇವೆ ಕಳುಹಿಸಿಬಿಡಿ ಅಂದುಬಿಟ್ಟರು. ಅಷ್ಟೇ ವೇಗವಾಗಿ ಹೊರಟೂಬಿಟ್ಟರು.
ಅವರು ಹೋದದ್ದನ್ನೇ ನೋಡುತ್ತಿದ್ದ ನನಗೆ ಪಕ್ಕದಲ್ಲಿ ದೇವಸ್ಥಾನದ ಅರ್ಚಕರು ಬಂದು ನಿಂತಿದ್ದು ತಿಳಿಯಲೇ ಇಲ್ಲ. ಬಂದವರೇ ಜಿಮ್ಮಾನಂದರ ಕಡೆ ನೋಡಿಕೊಂಡು, “ ಇವನು ತಲೆಕೆಟ್ಟವ, ಯಾವುದೋ “Software Company” ನಲ್ಲಿ ಕೆಲಸ ಮಾಡಿಕೊಂಡು ಇದ್ದ, India ಗೆ ಇವನ “Company” ಕೆಲಸವನ್ನೆಲ್ಲ ” Outsource” ಮಾಡಿ ಇವನಿಗೆ ಮನೆಯ ದಾರಿ ತೊರಿಸಿದೆ. ಕೆಲಸ ಇಲ್ಲದ ಇವನು ನಮ್ಮ ದೇವಸ್ಥಾನದ ಮುಂದೆ ನಮ್ಮ ಜನರನ್ನೆ ಜಾತಕ, ಭವಿಷ್ಯ ಅಂತ ಏಮಾರಿಸಿಕೊಂಡು ಇರುತ್ತಾನೆ. ನೀನು ಅವನಿಗೆ ಯಾವ ಸೇವೆಗೂ ದುಡ್ಡು ಕೊಡಲಿಲ್ಲ ತಾನೆ ” ಅಂದರು.
2 comments:
amazing writing harsha. you have a natural flow. keep writing.
Thanks a lot vivek
Post a Comment