ವಿಖ್ಯಾತ I.T ಪಾರ್ಕ್ನಲ್ಲಿ ಅಂಗಡಿ ಶುರು ಮಾಡಿ ತಿಂಗಳು ೬ ಆಯಿತು. ನಮ್ಮ ಗುರುಜಿಯಜ್ಯೋತಿಷ್ಯಾಲಯಕ್ಕೆ ಮನುಷ್ಯರಿರಲಿ, ಒಂದು ಸೊಳ್ಳೆಯೂ ಬಂದಿರಲಿಲ್ಲ.” ಅಲ್ರೀ ಗುರುಜಿ I.T company ಗಳ ಮುಂದೆ ಕನ್ನಡದಲ್ಲಿ board ನೇತುಹಾಕಿದ್ರೆ ನೊಣ ಹೊಡಿದೆ ಇನ್ನೇನ್ ಮಾಡ್ತೀರ?ಮೊದ್ಲು ಒಂದು English board ನೇತುಹಾಕ್ರಿ.” ಅಂತ ಮೊನ್ನೆ ಯಾರೊ ತಲೆಹರಟೆ ಬಾಯಿಬಡಿದಿದ್ದರಿಂದ ಅದನ್ನೂ ಮಾಡಿಸಿಯಾಗಿತ್ತು ನಮ್ಮ ಗುರುಜಿ. ಕಡೆಗೆ ತಮ್ಮ Consultancy feeಯನ್ನು ೫೦೦ ರುಪಾಯಿಗಳಿಂದ ೧೦೦ ರುಪಾಯಿಗಳಿಗೆ ಇಳಿಸಿಯೂ ಆಗಿತ್ತು. ಸಾಲದು ಅಂತinternet, blog, sms ಹಿಂಗೆಲ್ಲಾ publicity ಕೂಡ ಆಯಿತು. ಇನ್ನೇನು ಮಾಡಲೂ ತೋಚಲಿಲ್ಲನಮ್ಮ ಗುರುಜಿಗೆ. ತಮ್ಮ ಜಾತಕ ನೋಡಿಕೊಳ್ಳೋಣ ಅಂದರೆ ಅವರ ಮೇಲೆ ಅವರಿಗೇನಂಬಿಕೆಯಿಲ್ಲ, ಬೇರೆಯವರ ಹತ್ತಿರ ಕೊಟ್ಟು ಕೇಳೊಣ ಅಂದರೆ ಅವಮಾನದ ಹೆದರಿಕೆ. ಹೀಗೇ ೬ತಿಂಗಳು ಕಾಕಾ ಅಂಗಡಿಯ ಹಾಗೆ ವ್ಯಾಪಾರವೇ ಇಲ್ಲದೆ ಸುಮ್ನೆ ಬಸವನ ಹಾಗೆ ತಮ್ಮ ಗ್ರಹಗಳನ್ನಬೈಕೊಂಡು ಕೂತಿದ್ರು ನಮ್ಮ ಗುರುಜಿಗಳು. ” ಈ ದರಿದ್ರ I.T ನೋರಿಗೆ ದೇವ್ರ ಮೇಲೆ ನಂಬಿಕೇನೇ ಇಲ್ಲ ಹಾಳಾದ ನಾಸ್ತಿಕರು. ಕಲಿಯುಗ, ಕಲಿಯುಗ”ಅಂತ ನಮ್ಮ ಗುರುಜಿ ಯಾರದ್ರು ವ್ಯಾಪಾರದ ಬಗ್ಗೆ ಕೇಳಿದರೆ ಶಿಡುಕು ಮೂತಿ ಹಾಕಿ ಗೊಣಗುತ್ತಿದ್ದರು.
ಅವತ್ತು ಅದ್ಯಾವ ನರಿ ಮುಖ ನೋಡಿದ್ದರೋ ಏನೋ, ಬೆಳಿಗ್ಗೆ ತಮ್ಮ Astrology office ಬಾಗಿಲು ತೆಗೆಯೋಕೆ ಮುಂಚೆಯೇ ಬೀದಿ ಪೂರ್ತಿ ಜನ. “ಜನಮರುಳೋ ಜಾತ್ರೆ ಮರುಳೊ” ಅಂತಾರಲ್ಲ, ಹಂಗೆ ನಮ್ಮ ಗುರುಜಿ ಬಂದದ್ದೇ ತಡ, ಎಲ್ರೂ ಅವರ ಕಾಲಿಗೇ ಬಿದ್ದುಬಿಡೋದೇ? ಗುರುಜಿಗೆ ೨ನಿಮಿಷ ಏನೂತೋಚಲೇ ಇಲ್ಲ. ಜೀವನದಲ್ಲೇ ಇಷ್ಟು ಜನ ಅವರ ಕಾಲಿಗೆ ಬಿದ್ದದ್ದೇ ಇಲ್ಲ. ಗುರುಜಿ ಸರಿಯಾಗಿ ನೋದುತ್ತಾರೆ, ಇಡೀ ಮನೆತನವೇ ಪ್ರತ್ಯಕ್ಷ ಆಗಿದೆ!ಒಹೋ, ಒಳ್ಳೇ ಭಾರೀ ಕುಳವೇ ಸಿಕ್ತು ಅಂತ ನಮ್ಮ ಗುರುಜಿ, ತಮ್ಮ ಬಗ್ಗೆ ಹೊಗಳಿಕೊಂಡಿದ್ದೋ ಹೊಗಳಿಕೊಂಡಿದ್ದು. ” ರೀ, ಮೊನ್ನೆ ISRO ನೌರುಆಕಾಶಕ್ಕೆ ಬಿಟ್ರಲ್ಲ, INSAT ಉಪಗ್ರಹ. ಅದಕ್ಕೆ ನಾನೆ ಮಹೂರ್ಥ ಹಾಕಿ ಕೊಟ್ಟದ್ದು. ಇವತ್ತು ನೋಡಿ ಹೆಂಗೆ ಓಡ್ತಿದೆ ಅಂತ!! ಅದ್ಯಾವ್ದೊ ಚಂದ್ರಯಾಣಅಂತೆ: ನಾನು ಹೇಳಿದ್ದೆ ಅದನ್ನ ಇವಾಗಲೆ ಬಿಟ್ಬಿಡ್ಬೇಡಿ, ಅದಕ್ಕೆ ಗುರುಬಲ ಇಲ್ಲ ಅಂತ. ಇವಾಗ ಅದು ಕೆಟ್ಟು ಕೂತಿದೆಯಂತೆ.ನೋಡಿದ್ರಾ ಜ್ಯೋತಿಷ್ಯದಮಹಾತ್ಮೆ? ” ಅವರಲ್ಲಿ ಇದ್ದ ಒಬ್ಬ ೨೫-೨೬ ವಯಸ್ಸಿನ ಹುಡುಗ ತಕ್ಷಣವೇ, ” ಅಲ್ರೀ ಗುರುಜಿ, ಅದೇನ್ ನಮ್ ಬೆಂಗಳೂರಿನ ಕಿತ್ತೋಗಿರ ಆಟೋನೇ?ನೀವ್ ಹೇಳ್ದಾಗೆಲ್ಲ ಶುರು ಮಾಡಿ ಬಿಟ್ ಬಿಡಕ್ಕೆ?” ಅಂತ ಅಂದ್ಬಿಟ್ಟ. ಗುರುಜಿ ಏನ್ ಕಮ್ಮಿನ? ಅವರೂ ಶುರು ಮಾಡೇಬಿಟ್ರು, “ ಯಾರ್ರೀ ಇವ್ನು ತಲೆಹರಟೆ? ದೊಡ್ಡೋರು ಮಾತಾಡವಾಗ ಮಧ್ಯ ಬಾಯಿ ಹಾಕ್ತಾನೆ? ಏನಯ್ಯಾ ಯಾವ್ದಾದ್ರು I.T company ಯಲ್ಲ ಕೆಲ್ಸ ಮಾಡದು? ನಿಮ್ಮಂಥ ತಲೆಹರಟೆಗಳೆಲ್ಲ ಅಲ್ಲೇ ಇರದು. ಅಲ್ಲಿ ಜಾತಿ ಬದಲಾಯಿಸುತ್ತಾರಂತೆ ನಿಜಾನ? “ ಅಂತಎಲ್ಲ ಬೈದು ಸುಧಾರಿಸಿಕೊಂಡರು. ಅಲ್ಲ, I.T Company ಗಳಿಗೇನು ಬೇರೆ ಕೆಲಸ ಇರಲ್ವ? ಅದೇನು ನಮ್ ಸರ್ಕಾರವೇ ಹೀಗೆ ಏನೇನೋ ಕೆಲಸಕ್ಕೆ ಬರ್ದಿರೋದನ್ನ ಮಾಡಕ್ಕೆ?
ಸರಿ, ಹಿಂಗೆ ಒಂದಷ್ಟು ಮಾತಾಡಿ, ತನ್ನನ್ನು ತಾನೆ ಮತ್ತೆ ಹೊಗಳಿಕೊಂಡು ನಮ್ಮ ಗುರುಜಿ ವಿಷಯಕ್ಕೆ ಬಂದರು. “ ಹು, ಅದು ಸರಿ ಎಲ್ರು ಬಂದ ವಿಷಯ? ಯಾರ ಜಾತಕ ನೋಡ್ಬೇಕು? “ ಆಗ, ಗುಂಪಿನ ಒಬ್ಬರು ಅಜ್ಜಿ ಜಾತಕ ಕೊಟ್ಟು, ಆ ತಲೆ ಹರಟೆ ಹುಡುಗನ ಕಡೆ ತೋರಿಸಿ “ ಇವನಿಗೆ ಮದುವೆ ಮಾಡಲು ನಿರ್ಧಾರ ಮಾಡಿದ್ದೇವೆ.ಹುಡುಗಿಯ ಜಾತಕ ಕೂಡ ತಂದಿದ್ದೇವೆ. ಹೊಂದುವುದ ನೋಡಿ ಹೇಳಿ, “ ಅಂದು ತಮ್ಮ ಹಲ್ಲಿಲ್ಲದ ಬೊಚ್ಚುಬಾಯಿಯಿಂದಲೇ ನಕ್ಕರು. ಅಹಾ ಸಿಕ್ದ ಕೊನೇಗೂ ಕಳ್ಳ ಕೊರಮ. ಸೇಡ್ ತೀರಿಸ್ಕೋತೀನಿ ಇವಾಗ ಅಂತ ಅಂದುಕೊಂಡು ಗುರುಜಿ ಜಾತಕ ನೋಡಿದರು, “ ಅಯ್ಯೋ, ಅಯ್ಯೋ, ಈ ಜಾತಕದಲ್ಲಿ ಚಂದ್ರ ಗ್ರಹ ೭ನೇ ಮನೆಯಲ್ಲಿದೆ, ಸೂರ್ಯ ಗ್ರಹ ೧ ಮನೆಯಲ್ಲಿ ಅದಕ್ಕೆ ಕಾಟ ಕೊಡ್ತಿದೆ! ಬಹಳ ಅಪಾಯ” ಅಂತ ಪಾಪ ಆ ಹುಡುಗನ ಭವಿಷ್ಯ ನುಡಿದೇಬಿಟ್ಟರು. ಆ ಹುಡುಗ ಸುಮ್ಮನಿರಲಾರದೆ ತಕ್ಷಣ, “ ಅಲ್ರೀ ಗುರುಜಿ, ಏನ್ ಹೇಳ್ತಿದಿರ್ರೀ? ಚಂದ್ರ ಗ್ರಹ ಅಲ್ಲ, ಉಪಗ್ರಹ. ಸೂರ್ಯ ನಕ್ಷತ್ರ. ನಿಮ್ಗೆ ಇದು ಗೊತ್ತಿಲ್ವ? ಮೂರನೆ ಕ್ಲಾಸ್ ಮಗೂಗು ಗೊತ್ತಲ್ರೀ ಇದು” ಅಂತ ನಕ್ಕೇಬಿಟ್ಟ. ಪಾಪ ಅವನ ಅಜ್ಜಿ, ಅವನಿಗೆ ಸುಮ್ಮನಿರಲು ಕೈಯಲ್ಲೇ ಸನ್ನೆ ಮಾಡಿ ಸುಮ್ಮನಾದರು. ಗುರುಜಿ ಬಿಡಬೇಕಲ್ಲ “ ಹೋ ನೋಡಿ ಇದೇ ಕಲಿಯುಗ. ನಮ್ಮ ಸಂಸ್ಕ್ರುತಿ ಸಂಸ್ಕಾರಗಳಲ್ಲಿ ನಂಬಿಕೇನೇ ಇಲ್ಲ ಈ ಮುಂಡೇವಕ್ಕೆ” ಅಂತ ಗೊಣಗಿದರು. ಸರಿ ಇನ್ನು ಹೆಚ್ಚು ವಾದ ಮಾಡಿದರೆ ಬರೋ ದುಡ್ದಿಗೂ ಕಲ್ಲು ಅಂತ ಅಂದುಕೊಂಡು ೧೦ ನಿಮಿಷ ಜಾತಕ ನೋಡುವ ನೆಪ ಮಾಡಿದರು. ಏನೋ ದೀರ್ಘವಾಗಿ ಯೋಚಿಸಿ, ಲೆಖ್ಖ ಹಾಕಿ, ಗುಣಾಕಾರ ಭಾಗಾಕಾರ ಹಾಕಿ ಭವಿಷ್ಯ ನುಡಿದೇಬಿಟ್ಟರು. “ ಈ ಹುಡುಗನ ಜೊತೆ ಆ ಹುಡುಗಿಯ ಮದುವೇ ಸಾಧ್ಯವೇ ಇಲ್ಲ, ಜಾತಕಗಳು ಚೂರೂ ಹೊಂದೋದಿಲ್ಲ. ಹಾಗು ಒಂದುವೇಳೆ ಮದುವೆ ಮಾಡಿದರೆ, Divorce ಖಂಡಿತ”.
ಮನೆಗೆ ಎಲ್ಲರೂ ವಾಪಸ್ ಬಂದರು. ಎಲ್ಲರಲ್ಲೂ ಆತಂಕ, ಮನೆಯವರೆಲ್ಲ ಯೋಚನೆಯಲ್ಲಿ ಮುಳುಗಿದ್ದಾರೆ. ಅದು ಹುಡುಗ ಪ್ರೀತಿಸಿದ ಹುಡುಗಿಯ ಜಾತಕ. ಪಾಪ ಏನೂ ತೋಚದೆ ಅಳುತ್ತಿದ್ದಾನೆ. ಮನೆ ಪೂರ್ತಿ ಮೌನ, ಯಾರಿಗು ಏನು ಮಾತನಾಡಬೇಕೆಂಬುದು ತೋಚುತ್ತಿಲ್ಲ. ಅಷ್ಟರಲ್ಲಿ ಅಜ್ಜಿಯ mobile ಹೊಡೆದುಕೊಳ್ಳಲು ಶುರು ಮಾಡಿತು. ನೋಡಿದರೆ ಗುರುಜಿಯ ಕರೆ. ಆಶ್ಚರ್ಯ ದಲ್ಲಿ mobile ಕಿವಿಗಿಟ್ಟರೆ ಅಲ್ಲಿಂದ ಗುರುಜಿ, “ ನೋಡಿ, ಇನ್ನು ೧೦೦ ರುಪಾಯಿ ಕೊಟ್ಟರೆ ಹುಡುಗಿಯ ಜಾತಕ ಹೊಂದುವ ಹಾಗ ನಿಮ್ಮ ಹುಡುಗನ ಜಾತಕೆ ಬದಲಾಯಿಸಿ ಕೊಟ್ಟುಬಿಡುತ್ತೇನೆ.” ಅಂದಿದ್ದರು!!!
2 comments:
ಹಹಹ ತುಂಬಾ ಚೆನ್ನಾಗಿದೆ!
ಹಹಹ ತುಂಬಾ ಚೆನ್ನಾಗಿದೆ!
Post a Comment