ಹೃದಯದಲ್ಲೊಂದಿತ್ತು ಗೂಡು
ತೆರೆಯುವೆನದನ ನೀ ನೋಡು
ಅಲೆದಾಡಿದ್ದೆ ನಾ ಬೀದಿಯಲಿ ಅಲ್ಲೊಂದಿನ
ಪೇಚಾಡಿತು ಬಿಸಿಲಿಗೆ ಅಂದು ನನ್ನಾ ಮನ
ಎಲ್ಲೆಲ್ಲು ಹಲವಾರು ನನ್ನವರಲ್ಲದ ಜನ
ಮರೆಯಾಯಿತೆಲ್ಲೋ ಅಷ್ಟರಲ್ಲೆ ನನ್ನಾ ತನ
ಹೃದಯದಲ್ಲೊಂದಿತ್ತು ಗೂಡು
ತೆರೆಯುವೆನದನ ನೀ ನೋಡು
ಸೂರ್ಯ ತಲೆ ಮೇಲೆ ನಿಂತು ಕಾವೇರಿತು
ಕೆನ್ನೆ ಹಣೆಗಳೆರಡು ಬಿಸಿಲಿಗೆ ರಂಗೇರಿತು
ನಿನ್ನ ಕಂಡು ಮನವು ಹೌಹಾರಿತು
ಕಣ್ಣುಗಳೆರಡು ನಾಚಿಕೆಗೆ ಒಳಜಾರಿತು
ಹೃದಯದಲ್ಲೊಂದಿತ್ತು ಗೂಡು
ತೆರೆಯುವೆನದನ ನೀ ನೋಡು
ಬಾಯಾರಿದಂತಾಗಿ ಗಂಟಲು ಗಂಟಾದವು
ಜೀವ ಪ್ರಾಣಗಳೆರಡು ಸೇರಿ ಗುಂಪಾದವು
ನಿನ್ನ ಮಾತುಗಳೆಲ್ಲಾ ಕಿವಿಗೆ ಇಂಪಾದವು
ಜ್ನಾನ ಇಲ್ಲದೆ ಪದಗಳು ಮಂಕಾದವು
ಹೃದಯದಲ್ಲೊಂದಿತ್ತು ಗೂಡು
ತೆರೆಯುವೆನದನ ನೀ ನೋಡು
ಹೃದಯಕಷ್ಟು ಸಡಿಲ ಸಾಕಾಯಿತು
ಅದರ ಬಾಗಿಲುಗಳೆರಡೂ ನೂಕಾಯಿತು
ಒಳಗಿರುವ ಚಿತ್ರ ನಿನದಾಯಿತು
ನೀನದನ ನೋಡಿರಲು ಬಡಿತ ಜೋರಾಯಿತು
ಹೃದಯದಲ್ಲೊಂದಿತ್ತು ಗೂಡು
ತೆರೆಯುವೆನದನ ನೀ ನೋಡು
No comments:
Post a Comment