ಹುಟ್ದಾಗಿಂದ್ಲೇ ಶುರು ಕಾಟ
ಹೋಮ್ ವರ್ಕ್ ಇದ್ರೆ ಇಲ್ಲ ಆಟ
ಆಗ್ಲೇ ಶುರು ನಮ್ಮ ಓಟ
ಇದು ನ್ಯಾಯಾನ?
ಸ್ಕೂಲಲ್ ಕೂತು ದಿನವು ಎಲ್ಲ
ಟ್ಯೂಶನ್ ನಲ್ಲಿ ಬೋರಾದ್ರಲ್ಲ
ಮಾರ್ಕ್ಸ್ ಬರ್ದಿದ್ರೆ ಮಗಾನೆ ಅಲ್ಲ
ಇದು ನ್ಯಾಯಾನ?
ಪಿಯು ಆಯ್ತು ಡಿಗ್ರೀಗ್ ಬಂದ್ವಿ
ನಾನೇ ರಾಜ ಅನ್ಕೊಂಡಿದ್ವಿ
ಜೇಬಲ್ ಮಾತ್ರ ಕಾಸೆ ಇಲ್ಲ
ಇದು ನ್ಯಾಯಾನ?
ಮೊದಲನೆ ನೋಟ ಇಂಪಾರ್ಟೆಂಟು
ಅವಳ್ ಹೃದಯಕ್ ಹಾಕಿ ಟೆಂಟು
ಪ್ರೀತಿ ಅನ್ಕೊಂಡ್ ಕಾಯ್ತ ಕೂತ್ವಿ
ಇದು ನ್ಯಾಯಾನ?
ಸಾಲ ಮಾಡಿ ಗಾಡಿ ಕೊಂಡು
ಫ಼್ರೆಂಡ್ ದುಡ್ಡ್ನಲ್ಲಿ ಊಟ ಉಂಡು
ಕೆಲ್ಸ ಸಿಗಕ್ ಊರಲ್ಕೋಂಡ್ವಿ
ಇದು ನ್ಯಾಯಾನ?
ಆಮೇಲ್ ಬಂತು ಕೆಲ್ಸದ್ ಗೋಳು
ಬಾಸ್ ಮುಂದೆ ಬಕೆಟ್ ಸಾಲು
ತಿಂಗ್ಳ ಸಂಬ್ಳ ಜೀವ್ನ ಹಾಳು
ಇದು ನ್ಯಾಯಾನ?
ಅಲ್ಲಿಗ್ ಮದ್ವೆ ವಯಸ್ ಆಯ್ತು
ಕಲರ್ರು ಸಂಬ್ಳ ಹೈಟು ವೆಯ್ಟು
ಎಷ್ಟೇ ಇದ್ರು ಸಾಲದೆ ಹೋಯ್ತು
ಇದು ನ್ಯಾಯಾನ?
ಮದ್ವೆ ಆಗಿ ಮನೆ ಆಯ್ತು
ಹಣ ಇಲ್ದೆ ಜೇಬ್ ತೂತಾಯ್ತು
ಹೆಂಡ್ತಿ ಕಾಟಕ್ ಹಾರ್ಟ್ ವೀಕ್ ಆಯ್ತು
ಇದು ನ್ಯಾಯಾನ?
ನಂತ್ರ ಕಥೆ ಏನಾಯ್ತೊಪ್ಪ
ಒಟ್ನಲ್ ಹುಡುಗರ ಜೀವ್ನ ಪಾಪ
ಎಲ್ಲಾ ಹಿಂದಿನ್ ಜನುಮದ್ ಶಾಪ
ಇದು ನ್ಯಾಯಾನ?
1 comment:
hahahahaaaa good one :)
Post a Comment